ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಸಂಚಲನ ಸೃಷ್ಠಿಸಿದೆ. ಈ ಪ್ರಕರಣ ಬಯಲಾದ ಹಿನ್ನೆಲೆಯಲ್ಲಿ ಇದೀಗ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಇದು ಇಡೀ ಜಾರಕಿಹೊಳಿ ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಕೊಟ್ಟಿದೆ. ಅಷ್ಟೇ ಅಲ್ಲ ಇಡೀ ಕುಟುಂಬ ಇದೀಗ ಅವಮಾನ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಪ್ರಭಾವಿ ಕುಟುಂಬದ ರಮೇಶ ಜಾರಕಿಹೊಳಿ ಯುವತಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ನಡೆಸಿರೋ ಲೈಂಗಿಕ ದೌರ್ಜನ್ಯ ಇದೀಗ ಹಾನಿಯನ್ನು ಉಂಟುಮಾಡಿದೆ. ರಾಜ್ಯದಲ್ಲಿ ಪ್ರತಿಷ್ಠಿತ ಜಾರಕಿಹೊಳಿ ಕುಟಂಬಕ್ಕೆ ತನ್ನದೆಯಾದ ಅಭಿಮಾನಿ ಬಳಗ ಇದೆ. ಜತೆಗೆ ಐದು ಜನ ರಾಜಕೀಯ ಸಹೋದರರ ಪೈಕಿ ಮೂರು ಜನ ಶಾಸಕರಾಗಿದ್ದಾರೆ. ಹಿರಿಯ ಸಹೋದರ ರಮೇಶ ಜಾರಕಿಹೊಳಿ ಇದೀಗ ಲೈಗಿಂಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಜಿಲ್ಲೆ, ರಾಜ್ಯದಲ್ಲಿ ದೊಡ್ಡ ಹಿಡಿತ ಹೊಂದಿದ್ದ ಕುಟುಂಬಕ್ಕೆ ತೀವ್ರ ಮುಖಭಂಗವನ್ನು ಈ ಪ್ರಕರಣದಿಂದ ಆಗಿದೆ.

ಬೆಳಗಾವಿಯಲ್ಲಿ 2013ರಿಂದ ಜಾರಕಿಹೊಳಿ ಕುಟುಂಬದ ಆಡಳಿತದ ನಡೆಯಲ್ಲೇ ಇದೆ. ಯಾವುದೇ ಸರ್ಕಾರ ಬರಲಿ, ಯಾರೇ ಮುಖ್ಯಮಂತ್ರಿಯಾಗಲಿ ಜಾರಕಿಹೊಳಿ ಕುಟುಂಬದಲ್ಲಿ ಮಾತ್ರ ಓರ್ವ ಸಚಿವ ಸ್ಥಾನ ಫಿಕ್ಸ್ ಇತ್ತು. ಅಷ್ಟರ ಮಟ್ಟಿಗೆ ಕುಟುಂಬ ಪ್ರಭಾವವನ್ನು ಗಳಿಸಿದ್ದರು. ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಮಹತ್ವ ಪಾತ್ರವನ್ನು ವಹಿಸಿದ್ದರು.
ಅಲ್ಲಿಂದ ರಾಜ್ಯದಲ್ಲಿ ಮತ್ತಷ್ಟು ವರ್ಚಸ್ಸನ್ನು ಗಳಿಸುವ ಯತ್ನವನ್ನು ರಮೇಶ್ ಜಾರಕಿಹೊಳಿ ಮಾಡಿದ್ದರು. ಆದರೇ ಒಂದೇ ಸಿಡಿ ಪ್ರಕರಣ 30 ವರ್ಷದ ರಾಜಕೀಯ ಜೀವನದ ಮೇಲೆ ಕಪ್ಪು ಚುಕ್ಕೆ ತಂದಿದೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಮೊದಲು ನಂತರ ರಮೇಶ ಜಾರಕಿಹೊಳಿ ಮಂತ್ರಿಯಾಗಿದ್ದರು. ಇಬ್ಬರು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಂತರ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿಯೂ ಇಬ್ಬರು ಸಹೋದರರು ಸಚಿವರಾಗಿದ್ದರು. ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಮಾತ್ರ ಬೆಳಗಾವಿಗೆ ಸಚಿವ ಜಗದೀಶ ಶೆಟ್ಟರ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ನಂತರ ಮತ್ತೆ ರಮೇಶ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಜವಾಬ್ದಾರಿ ವಹಿಸಿದ್ದರು.
ಜಾರಕಿಹೊಳಿ ಕುಟಂಬ ರಾಜಕೀಯಲ್ಲಿ ಪ್ರಾಭಲ್ಯ ಸಾಧಿಸಿದ್ದು, ಕುಟುಂಬದ ಓರ್ವ ಸಹೋದರ ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸು ಕಂಡಿತ್ತು. ಆದರೇ ಒಂದು ಸಿಡಿ ಪ್ರಕರಣ ಇಡೀ ಕುಟುಂಬವನ್ನು ಡ್ಯಾಮೆಜ್ ಮಾಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಿನ್ನೆಯಿಂದ ಎಲ್ಲಿಯೂ ಬಹಿರಂತವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಆಗಿರೋ ಅವಮಾನ ಹಿನ್ನೆಲೆಯಲ್ಲಿ ಜನರಿಂದ ದೂರು ಉಳಿದುಕೊಂಡಿದ್ದಾರೆ. ಪಕ್ಷದ ಪರ ಮಾತನಾಡಬೇಕೆ, ಸಹೋದರನ ಪರ ಮಾತನಾಡಬೇಕು ಎನ್ನುವುದು ಅವರ ಗೊಂದಲ. ಇನ್ನೂ 30 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಗೌರವ ಹಾಳಾಯಿತು ಎನ್ನುವು ನೋವು ಇದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಸತೀಶ ಜಾರಕಿಹೊಳಿ.