Sunday, March 26, 2023
  • ಸಿನಿಮಾ
Home ಸಿನಿಮಾ ಕಡೆಗೂ ರಿಲೀಸ್​ ಆಯ್ತು ಯುವರತ್ನ ಸಿನಿಮಾದ ಪಾಠಶಾಲಾ ಹಾಡು..!

ಕಡೆಗೂ ರಿಲೀಸ್​ ಆಯ್ತು ಯುವರತ್ನ ಸಿನಿಮಾದ ಪಾಠಶಾಲಾ ಹಾಡು..!

ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರಕಾರ್ಯ ಸಹ ಆರಂಭಿಸಿದೆ. ಜೊತೆಗೆ ಇತ್ತೀಚೆಗಷ್ಟೆ ಸಿನಿಮಾದ ಊರಿಗೊಬ್ಬ ರಾಜ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಅಪ್ಪು ಅಭಿಮಾನಿಗಳು ಪುನೀತ್​ ಹಾಕಿರುವ ಸಖತ್ ಸ್ಟೆಪಗಳಿಗೆ ಫಿದಾ ಆಗಿದ್ದಾರೆ. ಊರಿಗೊಬ್ಬ ರಾಜ ಹಾಡಿಗೂ ಮುನ್ನವೇ ರಿಲೀಸ್ ಆಗಬೇಕಿದ್ದ ಪಾಠಶಾಲಾ ಹಾಡು ತಾಂತ್ರಿಕ ಕಾರಣಗಳಿಂದಾಗಿ ಬಿಡುಗಡೆಯಾಗಿರಲಿಲ್ಲ. ಅದಕ್ಕಾಗಿ ಪುನೀತ್ ಅಭಿಮಾನಿಗಳಿಗೆ ತಾಳ್ಮೆಯಿಂದ ಕಾಯುವಂತೆ ಮನವಿ ಮಾಡಿದ್ದರು. ಅದಕ್ಕಾಗಿಯೇ ಊರಿಗೊಬ್ಬ ಹಾಡನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ಈಗ ಕೊನೆಯೂ ಪಾಠಶಾಲ ಹಾಡು ರಿಲೀಸ್ ಆಗಿದೆ.

 ಕಡೆಗೂ ರಿಲೀಸ್​ ಆಯ್ತು ಯುವರತ್ನ ಸಿನಿಮಾದ ಪಾಠಶಾಲಾ ಹಾಡು..!

ಅಪ್ಪು ಅಭಿನಯದ ಬಹುನಿರೀಕ್ಷಿತ ಯುವರತ್ನ. ಇನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೊಸ ವರ್ಷದ ದಿನ ಅಂದರೆ ಜನವರಿ ಒಂದರಂದು ಯುವರತ್ನ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸುವ ಮೂಲಕ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಟ್ಟಿತ್ತು. ಈಗ ಈ ಸಿನಿಮಾದ ನಾಲ್ಕನೇ ಹಾಡು ಪಾಠಶಾಲಾ… ರಿಲೀಸ್​ ಆಗಿದೆ.

ಥಮನ್​ ಸಂಗೀತ ನೀಡಿರುವ ಈ ಹಾಡಿಗೆ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರೇ ಸಾಹಿತ್ಯ ಬರೆದಿದ್ದಾರೆ. ಗಾಯಕ ವಿಜಯ್​ ಪ್ರಕಾಶ್​ ಅವರು ಈ ಹಾಡನ್ನು ಹಾಡಿರುವ ಈ ಹಾಡು ನಿಮ್ಮ ಶಾಲಾ-ಕಾಲೇಜು ದಿನಗಳನ್ನು ನೆನಪಿಸುವಂತಿದೆ.

ಇನ್ನು ತೆಲುಗಿನಲ್ಲೂ ಈ ಹಾಡು ಬಿಡುಗಡೆಯಾಗಿದೆ. ಕಲ್ಯಾಣ್​ ಚಕ್ರವರ್ತಿ ಅವರ ಸಾಹಿತ್ಯಕ್ಕೆ ವಿಶಾಲ್​ ಮಿಶ್ರ ದನಿಯಾಗಿದ್ದಾರೆ.

ಇತ್ತೀಚೆಗಷ್ಟೆ ರಿಲೀಸ್ ಆಗಿರುವ ಊರಿಗೊಬ್ಬ ರಾಜ ಹಾಡಿಗೆ ಮಿಶ್ರ​ ಪ್ರತಿಕ್ರಿಯೆ ವ್ಯಕ್ತಪವಾಗಿದೆ. ಪುನೀತ್​ ರಾಜ್​ಕುಮಾರ್​ ಹಾಡಿರುವ ಈ ಹಾಡಿಗೆ ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.

ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ರಿಲೀಸ್ ಆಗಲಿದೆ. ಇನ್ನು ಈಗಾಗಲೇ ರಿಲೀಸ್​ ಆಗಿರುವ ಹಾಡುಗಳು, ಪೋಸ್ಟರ್​ಗಳು ಹಾಗೂ ಟೀಸರ್​ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ.

ಯುವರತ್ನ ಸಿನಿಮಾದಲ್ಲಿ ಪುನೀತ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ದೇಹದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗಿ ಸಯೇಷಾ ನಟಿಸಿದ್ದಾರೆ. ಬಹಳ ಹಿಂದೆಯೇ ರಿಲೀಸ್ ಆಗಿರುವ ಈ ಸಿನಿಮಾದ ಪವರ್​ ಆಫ್​ ಯೂತ್​​ ಹಾಡು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಪುನೀತ್ ಅವರೊಂಗಿದೆ ಟಗರು ಖ್ಯಾತಿಯ ಡಾಲಿ ಧನಂಜಯ್​ ಸಹ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸುಧಾರಾಣಿ, ದಿಗಂತ್​, ಸೋನು ಗೌಡ, ರಾಧಿಕಾ ಶರತ್​ಕುಮಾರ್​, ಪ್ರಕಾಶ್​ ರೈ ಹಾಗೂ ಇತರರ ತಾರಾಬಳಗವಿದೆ. ಸದ್ಯ ಪುನೀತ್​ ಜೇಮ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದಲ್ಲಿ ಜೇಮ್ಸ್​ ಸಿನಿಮಾದ ಶೂಟಿಂಗ್​ ಶೆಡ್ಯೂಲ್​ ಮುಗಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

ಕನ್ನಡ ಚಿತ್ರರಂಗಕ್ಕೆ ಬಾಯ್​ ಬಾಯ್​ ಹೇಳಿ, ತೆಲುಗು ಚಿತ್ರರಂಗಕ್ಕೆ ಹಾಯ್​ ಹಾಯ್​ ಅಂದ ಶ್ರೀಲೀಲಾ..!

ತೆಲುಗು ಹಾಡಿನಲ್ಲಿ ಶ್ರೀಲೀಲಾ ಬೆಡಗು ಬಿನ್ನಾಣ..! ರೋಷನ್​ ಜೋಡಿಯಾಗಿ ‘ಕಿಸ್’​​ ಬೆಡಗಿ ಊಲಾಲಭರಾಟೆ ಚಿತ್ರದಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ಮುದ್ದು ಮುಖದ ಚೆಲುವೆ ಶ್ರೀಲೀಲಾ.. ಮೊದಲ ನೋಟದಲ್ಲೇ ಕನ್ನಡ ಸಿನಿರಸಿಕರ...

ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಎರಡನೇ ದಿನದಲ್ಲಿ ಮುಕ್ತಾಯಗೊಂಡಿದ್ದ ಭಾರತ-ಇಂಗ್ಲೆಂಡ್ ಸರಣಿಯ ಮೂರನೇ ಪಂದ್ಯ ನಡೆದ ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲೇ ಇಂದು ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಗಿಳಿದ ಆಂಗ್ಲರ ಪಡೆ...

ಕಡೆಗೂ ರಿಲೀಸ್​ ಆಯ್ತು ಯುವರತ್ನ ಸಿನಿಮಾದ ಪಾಠಶಾಲಾ ಹಾಡು..!

ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರಕಾರ್ಯ ಸಹ ಆರಂಭಿಸಿದೆ. ಜೊತೆಗೆ ಇತ್ತೀಚೆಗಷ್ಟೆ...

ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಕೊಟ್ಟ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ!

ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಸಂಚಲನ ಸೃಷ್ಠಿಸಿದೆ. ಈ ಪ್ರಕರಣ ಬಯಲಾದ ಹಿನ್ನೆಲೆಯಲ್ಲಿ ಇದೀಗ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಇದು...

Recent Comments