Sunday, March 26, 2023
  • ಕ್ರೀಡೆ
Home ಕ್ರೀಡೆ ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಎರಡನೇ ದಿನದಲ್ಲಿ ಮುಕ್ತಾಯಗೊಂಡಿದ್ದ ಭಾರತ-ಇಂಗ್ಲೆಂಡ್ ಸರಣಿಯ ಮೂರನೇ ಪಂದ್ಯ ನಡೆದ ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲೇ ಇಂದು ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಗಿಳಿದ ಆಂಗ್ಲರ ಪಡೆ ಆರಂಭಿಕ ಆಘಾತ ಅನುಭವಿಸಿದೆ. 30 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟುಗಾರರಾದ ಜ್ಯಾಕ್ ಕ್ರಾಲೀ, ಡಾಮ್ ಸಿಬ್ಲೀ ಹಾಗೂ ಸೆಕೆಂಡ್ ಡೌನ್ ಬಂದ ಜೋ ರೂಟ್ ಎರಡಂಕಿ ಮೊತ್ತವನ್ನೂ ಗಳಿಸಿದೇ ಔಟಾಗಿ ಪೆವಿಲಿಯನ್​ಗೆ ಮರಳಿದರು. ಆದರೆ, ನಾಲ್ಕನೇ ವಿಕೆಟ್​ಗೆ ಜಾನಿ ಬೇರ್​ಸ್ಟೋ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಜೊತೆಯಾಟದ ಮೂಲಕ ತಂಡದ ಮೊದಲ ಇನಿಂಗ್ಸ್​ಗೆ ಚೇತರಿಕೆ ನೀಡಿದರು.

India vs England – ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಭಾರತಕ್ಕೆ ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುಂದಿದೆಯಾದರೂ ಈ ಕೊನೆಯ ಪಂದ್ಯ ಬಹಳ ಮಹತ್ವ ಹೊಂದಿದೆ. ಸರಣಿ ಗೆಲುವನ್ನು ಖಚಿತಪಡಿಸಿಕೊಳ್ಳುವುದಷ್ಟೇ ಅಲ್ಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ತಲುಪಲು ಭಾರತಕ್ಕೆ ಈ ಪಂದ್ಯದಲ್ಲಿ ಸೋಲಾಗದಂತೆ ನೋಡಿಕೊಳ್ಳಬೇಕಿದೆ. ಈ ಪಂದ್ಯದಲ್ಲಿ ಡ್ರಾ ಆಗುವ ಸಾಧ್ಯತೆಯಂತೂ ತೀರಾ ಕಡಿಮೆ ಇದ್ದು, ಭಾರತಕ್ಕೆ ಗೆಲುವು ಅನಿವಾರ್ಯ ಎಂಬಂತಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದ ನಂತರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, ನಂತರದ ಎರಡು ಪಂದ್ಯಗಳ ಸೋಲು ಅದನ್ನ ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಈ ನಾಲ್ಕನೇ ಪಂದ್ಯವನ್ನ ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾ ತಂಡ ಭಾರತವನ್ನ ಹಿಂದಿಕ್ಕುತ್ತದೆ. ಭಾರತ ಈ ಪಂದ್ಯವನ್ನ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳುತ್ತದೆ. ನ್ಯೂಜಿಲೆಂಡ್ ತಂಡ ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.

ಇಂಗ್ಲೆಂಡ್ ತಂಡ: ಜೋ ರೂಟ್, ಜ್ಯಾಕ್ ಕ್ರಾಲೀ, ಡಾಮ್ ಸಿಬ್ಲೀ, ಜಾನಿ ಬೇರ್​ಸ್ಟೋ, ಬೆನ್ ಸ್ಟೋಕ್ಸ್, ಓಲೀ ಪೋಪ್, ಡಾನ್ ಲಾರೆನ್ಸ್, ಬೆನ್ ಫೋಕ್ಸ್, ಡಾಮ್ ಬೆಸ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಭಾರತ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಧ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್

LEAVE A REPLY

Please enter your comment!
Please enter your name here

Most Popular

ಕನ್ನಡ ಚಿತ್ರರಂಗಕ್ಕೆ ಬಾಯ್​ ಬಾಯ್​ ಹೇಳಿ, ತೆಲುಗು ಚಿತ್ರರಂಗಕ್ಕೆ ಹಾಯ್​ ಹಾಯ್​ ಅಂದ ಶ್ರೀಲೀಲಾ..!

ತೆಲುಗು ಹಾಡಿನಲ್ಲಿ ಶ್ರೀಲೀಲಾ ಬೆಡಗು ಬಿನ್ನಾಣ..! ರೋಷನ್​ ಜೋಡಿಯಾಗಿ ‘ಕಿಸ್’​​ ಬೆಡಗಿ ಊಲಾಲಭರಾಟೆ ಚಿತ್ರದಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ಮುದ್ದು ಮುಖದ ಚೆಲುವೆ ಶ್ರೀಲೀಲಾ.. ಮೊದಲ ನೋಟದಲ್ಲೇ ಕನ್ನಡ ಸಿನಿರಸಿಕರ...

ಸರಣಿ ಗೆಲುವಿಗೆ ಭಾರತ ಗುರಿ; ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಎರಡನೇ ದಿನದಲ್ಲಿ ಮುಕ್ತಾಯಗೊಂಡಿದ್ದ ಭಾರತ-ಇಂಗ್ಲೆಂಡ್ ಸರಣಿಯ ಮೂರನೇ ಪಂದ್ಯ ನಡೆದ ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲೇ ಇಂದು ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಗಿಳಿದ ಆಂಗ್ಲರ ಪಡೆ...

ಕಡೆಗೂ ರಿಲೀಸ್​ ಆಯ್ತು ಯುವರತ್ನ ಸಿನಿಮಾದ ಪಾಠಶಾಲಾ ಹಾಡು..!

ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರಕಾರ್ಯ ಸಹ ಆರಂಭಿಸಿದೆ. ಜೊತೆಗೆ ಇತ್ತೀಚೆಗಷ್ಟೆ...

ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಕೊಟ್ಟ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ!

ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಸಂಚಲನ ಸೃಷ್ಠಿಸಿದೆ. ಈ ಪ್ರಕರಣ ಬಯಲಾದ ಹಿನ್ನೆಲೆಯಲ್ಲಿ ಇದೀಗ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಇದು...

Recent Comments