ನವದೆಹಲಿ: ದೇಶಭ್ರಷ್ಟರಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆ ಸರ್ಕಾರವು ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ, ಆದರೆ ಅಪರಾಧಿಗಳು ರಾಷ್ಟ್ರದ ಗಡಿ ದಾಟಿ ಹೋಗುವ ಮೂಲಕ ಶಿಕ್ಷೆಯಿಂದ ತಪ್ಪಿಸಿಕೊಳ್ಲಲು ಸಹ ಸಾಧ್ಯವಾಗುವುದಿಲ್ಲ ಎಂದು ಬ್ರಿಟಿಷ್ ಹೈಕಮಿಷನರ್ ಸರ್ ಫಿಲಿಪ್ ಬಾರ್ಟನ್ ಗುರುವಾರ ಹೇಳಿದ್ದಾರೆ.
ಆನ್‌ಲೈನ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಾರ್ಟನ್ ಅವರಿಗೆ ಮಲ್ಯ ಯುಕೆ ಯಲ್ಲಿ ಆಶ್ರಯ ಕೋರಿದ್ದಾರೆಯೆ? ಎಂದು ಪ್ರಶ್ನಿಸಲಾಗಿ ಅವರು ತನ್ನ ಸರ್ಕಾರವು ಅಂತಹ ವಿಷಯಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
“ಯುಕೆ ಸರ್ಕಾರ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುವ ನ್ಯಾಯಾಲಯಗಳು, ಜನರು ಬೇರೆ ದೇಶಕ್ಕೆ ಹೋಗುವುದರ ಮೂಲಕ ಶಿಕ್ಷೆಯಿಂದ ತಪ್ಪಿಸಿಕೊಳ್ಲುವುದನ್ನು ತಡೆಯುವಲ್ಲಿ ತಮ್ಮ ಪಾತ್ರದ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟ ನಿಲುವನ್ನು ಹೊಂದಿದೆ. . ಯಾವುದೇ ಸಂದರ್ಭದಲ್ಲಿ ನಮ್ಮ ಪಾತ್ರವನ್ನು ವಹಿಸಲು ನಾವೆಲ್ಲರೂ ದೃಢನಿಶ್ಚಯವನ್ನು ಹೊಂದಿದ್ದೇವೆ ರಾಷ್ಟ್ರದ ಗಡಿಗಳನ್ನು ದಾಟುವ ಮೂಲಕ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ” ಅವರು ಹೇಳಿದ್ದಾರೆ.
ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ನಡೆಯುತ್ತಿರುವ ಕಾನೂನು ಪ್ರಕರಣದಲ್ಲಿ ಯುಕೆ ಯಾವ ಹೊಸ ಬದಲಾವಣೆ ಹೊಂದಿಲ್ಲ ಎಂದು ಅವರು ಹೇಳಿದರು.”ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವುದಕ್ಕಾಗಿ ನಡೆಯುತ್ತಿರುವ ಕಾನೂನು ಪ್ರಕರಣದ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಮಯದ ಮಿತಿಯ ಬಗ್ಗೆ ನಾನು ಏನನ್ನೂ ಹೇಳಲಾರೆ” ಎಂದು ಬಾರ್ಟರ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಹೊಸದಾಗಿ ನೇಮಕಗೊಂಡ ರಾಯಭಾರಿ ಯುಕೆ ಸರ್ಕಾರವು ಈ ಪ್ರಕರಣಕ್ಕೆ ಭಾರತವು ನೀಡುವ ಪ್ರಾಮುಖ್ಯತೆಯನ್ನು ಅರಿತಿದೆ ಎಂದೂ ನುಡಿದರು.